ತರಕಾರಿ ಪಲಾವ್ ಬಹಳ ರುಚಿಯಾದದ್ದು

ಮನೆಯಲ್ಲೇ ಸುಲಭವಾಗಿ ಮಾಡುವ ರುಚಿಯಾದ ವೆಜ್ ಪುಲಾವ್

ಸಾಧಾರಣ ಮನೆಯ ಸಾಮಗ್ರಿಗಳಿಂದ ಕೂಡ ಬಹಳ ರುಚಿಯಾದ ಹಾಗೂ ಸುಗಂಧಭರಿತವಾದ ಊಟವನ್ನು ಮಾಡಬಹುದು. ಅದರಲ್ಲಿ ವೆಜ್ ಪುಲಾವ್ ಒಂದು ಅತ್ಯುತ್ತಮ ಆಯ್ಕೆ. ಇದು ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ತಿನಿಸು. ಮಧ್ಯಾಹ್ನದ ಊಟಕ್ಕೂ, ರಾತ್ರಿ ಊಟಕ್ಕೂ ತುಂಬ ಸೂಕ್ತ. ಕಡಿಮೆ ಸಮಯದಲ್ಲಿ, ಕಡಿಮೆ ಸಾಮಗ್ರಿಗಳಿಂದ ಮಾಡುವ ಈ ಪುಲಾವ್ ಆರೋಗ್ಯಕರವೂ ಆಗಿದೆ.

■ ಬೇಕಾಗುವ ಸಾಮಗ್ರಿಗಳು

● ಅಕ್ಕಿ – 1 ಕಪ್

● ಈರುಳ್ಳಿ – 2 (ಸಣ್ಣದಾಗಿ ಕತ್ತರಿಸಿದ)

● ಟೊಮೇಟೊ – 1

● ಕ್ಯಾರೆಟ್ – 1

● ಬೀನ್ಸ್ – 6 ರಿಂದ 8

● ಬಟಾಣಿ – ಅರ್ಧ ಕಪ್

● ಹಸಿಮೆಣಸು – 2

● ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ

● ಎಣ್ಣೆ ಅಥವಾ ತುಪ್ಪ – 3 ಚಮಚ

● ಲವಂಗ – 3

● ಏಲಕ್ಕಿ – 2

● ದಾಲ್ಚಿನ್ನಿ – 1 ತುಂಡು

● ಉಪ್ಪು – ರುಚಿಗೆ ತಕ್ಕಷ್ಟು

● ಕೊತ್ತಂಬರಿ ಸೊಪ್ಪು – ಸ್ವಲ್ಪ

● ನೀರು – 2 ಕಪ್

☆ಮಾಡುವ ವಿಧಾನ

ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು 15 ನಿಮಿಷ ನೆನೆಸಿಡಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ ಸ್ವಲ್ಪ ಫ್ರೈ ಮಾಡಿರಿ.

ಈಗ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸು ಹಾಕಿ ಚೆನ್ನಾಗಿ ಕಲಸಿ. ನಂತರ ಟೊಮೇಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.

ಇದಾದ ಬಳಿಕ ಕ್ಯಾರೆಟ್, ಬೀನ್ಸ್, ಬಟಾಣಿ ಸೇರಿಸಿ 5 ನಿಮಿಷ ಹುರಿಯಿರಿ. ಈಗ ನೆನೆಸಿದ ಅಕ್ಕಿಯನ್ನು ಸೇರಿಸಿ ನಿಧಾನವಾಗಿ ಕಲಸಿ. ನಂತರ ಬೇಕಾದಷ್ಟು ಉಪ್ಪು ಹಾಗೂ 2 ಕಪ್ ನೀರು ಹಾಕಿ ಮುಚ್ಚಳ ಹಾಕಿ ಬೇಯಲು ಬಿಡಿ.

ಅಕ್ಕಿ ಚೆನ್ನಾಗಿ ಬೇಯಿದ ನಂತರ ಮೇಲಿಂದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.

◇ ತಿನ್ನುವ ವಿಧಾನ

ಈ ವೆಜ್ ಪುಲಾವ್ ಅನ್ನು ರೈತ, ಮೊಸರು ಅಥವಾ ಗೋಬಿ ಮಂಚೂರಿಯ ಜೊತೆಗೆ ತಿಂದರೆ ಇನ್ನೂ ಹೆಚ್ಚು ರುಚಿಯಾಗುತ್ತದೆ. ಮನೆಯಲ್ಲಿರುವ ಸರಳ ಸಾಮಗ್ರಿಗಳಿಂದ ಮಾಡಿದರೂ ಹೋಟೆಲ್ ರುಚಿ ಬರುತ್ತದೆ.

♧ ಆರೋಗ್ಯದ ಲಾಭಗಳು

ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ಬಟಾಣಿ ದೇಹಕ್ಕೆ ಪ್ರೋಟೀನ್ ನೀಡುತ್ತದೆ

ಅಕ್ಕಿ ಶಕ್ತಿ ನೀಡುತ್ತದೆ

ತುಪ್ಪ ಅಥವಾ ಎಣ್ಣೆ ಆಹಾರಕ್ಕೆ ಸುವಾಸನೆ ಹಾಗೂ ರುಚಿ ಹೆಚ್ಚಿಸುತ್ತದೆ

ಸರಳವಾಗಿ ಮಾಡುವ ಈ ರುಚಿಯಾದ ವೆಜ್ ಪುಲಾವ್ ಮನೆಯವರ ಮನಸ್ಸು ಗೆಲ್ಲುವ ಖಾದ್ಯ. ಒಮ್ಮೆ ಮಾಡಿ ನೋಡಿ, ಮತ್ತೆ ಮತ್ತೆ ಮಾಡಬೇಕೆನಿಸುತ್ತದೆ!

 

ಧನ್ಯವಾದಗಳು 🙂

Leave a Comment